ಇಂದು ಚಿಕ್ಕಪ್ಪನ ಜೊತೆ ಮಾತನಾದುತ್ತಿದಾಗ ಅವರ ತಲೆಗೆ ಬಂದ ಅನೇಕ ಹಾಡುಗಳಲ್ಲಿ ಒಂದು! ಹಾಸ್ಯಕರವಾದದ್ದು!
ಬಂದರೆ ತಂಗಿ, ಕೇಳೋ ಕಮಂಗಿ,
ಮನೆ ಮಠ ಚೊಕ್ಕಟ, ಕೈಯಲಿ ಕರಟ,
ಸಾಲದ ಸುರಿಮಳೆ ತರುತಾಳೆ!
ಇದು ಕೇವಲ ಒಂದು ಸಣ್ಣ ಕವನ, ತಲೆ ಕೆಡಸಿಕೊಂಡು ಕಿರ್ಚಾದ್ಬೇಡಿ ಬಡ್ಡಿಮಕ್ಳ!
Monday, June 22, 2009
Tuesday, May 19, 2009
ಕನ್ನಡದ ಪ್ರಯತ್ನಗಳು
ಇತ್ತೀಚಿಗೆ ನನಗೆ ಕನ್ನಡ ಬರೆಯುವ ಬಯಕೆ ಬಹಳ ಹೆಚ್ಚಾಗಿದೆ. ನನ್ನ ಮಾತೃ ಭಾಷೆಗಳಲ್ಲಿ ಒಂದಾದರೂ ಕೂಡ ನನಗೆ ಕನ್ನಡ ಬರೆಯುವ ಅಭ್ಯಾಸ ಬಹಳ ವರ್ಷಗಳಿಂದ ತಪ್ಪಿ ಹೋಗಿದೆ. ಅದರ ಕರಣ, ನನ್ನ ವಿದ್ಯಾಭ್ಯಾಸ, ಯಾಕೆಂದರೆ ನನ್ನ ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ಭಾಷೆಯು ಇರಲಿಲ್ಲ, ಅದರ ಮೇಲೆ ನಾನು ಕೂಡ ಕನ್ನಡಕ್ಕೆ ಯಾವ ಕಾಲವನ್ನು ಮೀಸಲು ಇಡಲಿಲ್ಲ, ಕನ್ನಡ ಬರೆಯಲ್ಲಿಲ್ಲ, ಕನ್ನಡ ಪುಸ್ತಕ ಓದಲಿಲ್ಲ , ಕನ್ನಡ ದಿನಪತ್ರಿಕೆ ಕೂಡ ಓದಲಿಲ್ಲ, ಇವಕ್ಕೆ ಸೇರಿಸಿದಂತೆ ಕನ್ನಡ ವಾಹಿನಿಗಳಲ್ಲಿ ಬರುವ ಕಾರ್ಯಕ್ರಮಗಳು.... ದೇವರಿಗೆ ಪ್ರೀತಿ! ಹೀಗಾಗಿ ನನಗೆ ಕನ್ನಡ ಅಷ್ಟು ಚೆನ್ನಾಗಿ ಬರುವುದಿಲ್ಲ, ಆದರೆ ಕಲಿಯಲು ಈಗ ಆಸಕ್ತಿ ಬಂದಿದೆ, ಬರೆಯಲು ಆಸಕ್ತಿ ಬಂದಿದೆ, ಓದಲು, ಸವಿಯಲು, ಕೇಳಲು ಹಾಗು ಮಾತಾಡಲು, ಮಾತು ಬಿಡಿ, ಮುಂಚಿನಿಂದಲೇ ಇತ್ತು, ಈಗ ಮಿಕ್ಕಿರುವುದನ್ನು ಕಲಿಯಲು ಸಮಯ ಬಂದಿದೆಯೆಂದು ನನ್ನ ನಂಬಿಕೆ. ಅದಕ್ಕೆ ನಾನು ನನ್ನ ಕನ್ನಡ ಬರೆಯುವ ಪ್ರಯತ್ನಗಳನ್ನು ಈ ಬ್ಲಾಗ್ ನ ಮೂಲಕ ವ್ಯಕ್ತ ಪಡಿಸಲು ನಿರ್ಧರಿಸಿದ್ದೇನೆ, ಹೀಗಾಗಿ, ಏನಾದರು ತಪ್ಪುಗಳು, ಅಥವಾ, ಓದುವವರ ದೃಷ್ಟಿ ಕೋನದಿಂದ ಬರುವ ಅನಿಸಿಕೆಗಳು ನನಗೆ ತಿಳಿದರೆ, ನನ್ನ ಕನ್ನಡ ಜ್ಞಾನವನ್ನು ನಾನು ಹೆಚಿಸಿಕೊಳ್ಳಲು ಬಹಳ ಸಹಾಯವಾಗುವುದು.
ನನ್ನ ಮೊದಲನೆ ಬ್ಲಾಗ್ ನಲ್ಲಿ ಬರೆಯಲು ನನಗೆ ಏನು ತೋಚುತ್ತಿಲ್ಲ, ಆದರು ಏನೋ ಒಂದು ಬರೆದೆ. ಇನ್ನು ಮುಂದೆ, ನನ್ನ ಆಂಗ್ಲ ಭಾಷೆಯ ಬ್ಲಾಗ್ ನಲ್ಲಿ ಬರೆಯುವ ಕೆಲವು ಪ್ರಬಂಧಗಳನ್ನು ಅಲ್ಲಿಯ ಬದಲು ಇಲ್ಲಿ ಬರೆಯಬಹುದು ಎಂದು ನನ್ನ ನಂಬಿಕೆ. ಅದರ ಬಗ್ಗೆ ನಿಮಗೆ ಅನಿಸಿಕೆಗಳು ಇದ್ದಲ್ಲಿ, ದಯವಿಟ್ಟು ತಿಳಿಸಿ ಅಥವಾ ಬೇರೆ ಯಾವುದಾದರು ವಿಧನವಿದ್ದಲ್ಲಿ ಅದನ್ನು ಹೇಳಲು ಸಂದೆಹಿಸಬೇಡಿ. ಇವತ್ತಿಗೆ ಬರೆದಿದ್ದು ಸಾಕು ಎನ್ನುವುದು ನಾನ ಅಭಿಪ್ರಾಯ. ತಿರಗ ಬರೆಯುವ ತನಕ ನಿಮಗೆಲ್ಲರಿಗೂ "ಗೆಕ್ಕೋ" ಮಾಡುವ ನಮಸ್ಕಾರಗಳು! ಶುಭದಿನ!
"ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ"
-ಕುವೆಂಪು
ಗೆಕ್ಕೋ

Subscribe to:
Comments (Atom)